ಹೀಗೊಂದು ದಿನ ಸಿಂಧು ಲೋಕನಾಥ್ ಅಭಿನಯದ 2018 ರ ಕನ್ನಡ ಚಲನಚಿತ್ರವಾಗಿದೆ. ನಿರ್ದೇಶಕ, ಸಂಕಲನ ಮತ್ತು ಛಾಯಾಗ್ರಾಹಕ ವಿಕ್ರಮ್ ಯೋಗಾನಂದ್ . ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಅಭಿಲಾಷ್ ಗುಪ್ತಾ ಸಂಯೋಜಿಸಿದ್ದಾರೆ. == ಕಥಾವಸ್ತು == ಇದು ಮುಂಜಾನೆ 6 ರಿಂದ 8.30 ರವರೆಗೆ ಚಿತ್ರೀಕರಿಸಲಾದ ಒಂದು ಸಂಕಲನ ಮಾಡದ, ಪ್ರಯೋಗಾತ್ಮಕ ಚಲನಚಿತ್ರವಾಗಿದ್ದು, ಆ ಸಮಯದ ಚೌಕಟ್ಟಿನಲ್ಲಿ ಕಥೆಯು ತೆರೆದುಕೊಳ್ಳುತ್ತದೆ. ಚಿತ್ರದಲ್ಲಿ ಒಬ್ಬ ಹುಡುಗಿ ಪ್ರತಿ ಫ್ರೇಮ್‌ನಲ್ಲಿದ್ದಾಳೆ. ಮತ್ತು ಇತರರು ಬಂದು ಹೋಗುತ್ತಾರೆ. ಚಿತ್ರದ ಕತೆಯ ಅವಧಿ ಮತ್ತು ಚಿತ್ರದ ಅವಧಿ ಎರಡೂ ಎರಡು ಗಂಟೆಗಳ ಸಮಯ ಆಗಿದೆ. == ಪಾತ್ರವರ್ಗ == ಸಿಂಧು ಲೋಕನಾಥ್ ಪ್ರವೀಣ್ ತೇಜ್ ಪದ್ಮಜಾ ರಾವ್ ಗುರುಪ್ರಸಾದ್ ಮಿತ್ರ ಶೋಬರಾಜ್ ಗಿರೀಶ್ ಶಿವಣ್ಣ ಗಿರಿಜಾ ಲೋಕೇಶ್ ಬಾಲಾಜಿ ಮನೋಹರ್ == ಸಂಗೀತ == ಹಾಡುಗಳಿಗೆ ಅಭಿಲಾಷ್ ಗುಪ್ತಾ ಸಂಗೀತ ನೀಡಿದ್ದಾರೆ. ಈ ಚಲನಚಿತ್ರವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ 9 ಮಾರ್ಚ್ 2018 ರಂದು ಬಿಡುಗಡೆಯಾಗಲಿತ್ತು, ಆದರೆ ನಂತರ 30 ಮಾರ್ಚ್ 2018 ರಂದು ಬಿಡುಗಡೆಯಾಯಿತು == ಉಲ್ಲೇಖಗಳು ==